ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಸೌಲಭ್ಯಕ್ಕೆ ₹4.25 ಲಕ್ಷ ಆರ್ಥಿಕ ನೆರವು | ಆಗಸ್ಟ್ 30ರೊಳಗೆ ಅರ್ಜಿ ಹಾಕಿ… Karnataka Ganga Kalyana Scheme 2024

WhatsApp Group Join Now
Telegram Group Join Now
Spread the love

Karnataka Ganga Kalyana Scheme 2024 : ಗಂಗಾಕಲ್ಯಾಣ ಯೋಜನೆಯಡಿ (Ganga Kalyana Borewell Scheme) ಉಚಿತ ಬೋರ್‌ವೆಲ್ ಪಡೆಯುವುದು ಹೇಗೆ? ಯಾವೆಲ್ಲ ಜಾತಿಯ ರೈತರು ಈ ಸೌಲಭ್ಯ ಪಡೆಯಲು ಅರ್ಹರು? ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಫಲಾನುಭವಿಗಳ ಆಯ್ಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಸಣ್ಣ ಮತ್ತು ಅತೀ ಸಣ್ಣ ರೈತರ ಹಿತದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಈ ಪೈಕಿ ನೀರಾವರಿ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಿವಿಧ ನಿಗಮಗಳ ಮೂಲಕ ರೈತರಿಗೆ ಉಚಿತ ಬೋರ್‌ವೆಲ್ ಯೋಜನೆಗಳನ್ನು ಜಾರಿಗಿಳಿಸಿದೆ. ಇವುಗಳ ಪೈಕಿ ಗಂಗಾಕಲ್ಯಾಣ ಯೋಜನೆಯೂ ಒಂದಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಜಮೆಗೆ ಕೃಷಿ ಇಲಾಖೆ ಸೂಚನೆ | ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ PM Kisan Samman Nidhi Mobile Updation

ಗಂಗಾಕಲ್ಯಾಣ ಯೋಜನೆಯಡಿ ರಾಜ್ಯದಲ್ಲಿ ಅಂತರ್ಜಲ ಕಡಿಮೆಯಾಗಿರುವ ಜಿಲ್ಲೆಗಳು ಹಾಗೂ ಅಂತರ್ಜಲ ಅಧಿಕವಾಗಿರುವ ಜಿಲ್ಲೆಗಳಿಗೆ ಒಂದೊAದು ರೀತಿಯ ಸಹಾಯಧನ ಸೌಲಭ್ಯವನ್ನು ನಿಗಧಿಪಡಿಸಲಾಗಿದೆ. ಎರಡೂ ರೀತಿಯ ಜಿಲ್ಲ ರೈತರಿಗೆ ಸಿಗಲಿರುವ ಸೌಲಭ್ಯಗಳ ವಿವರ ಈ ಕೆಳಗಿನಂತಿದೆ:

ಅಂತರ್ಜಲ ಕಡಿಮೆಯಾಗಿರುವ ಜಿಲ್ಲೆಗಳು
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಕೋಲಾರ
  • ಚಿಕ್ಕಬಳ್ಳಾಪುರ
  • ರಾಮನಗರ
  • ತುಮಕೂರು

ಈ ಜಿಲ್ಲೆಗಳ ಅರ್ಹ ರೈತರು 2 ಎಕರೆ ಯಿಂದ 5 ಎಕರೆ ಜಮೀನು ಒಳಗೆ ಜಮೀನು ಹೊಂದಿರಬೇಕು. ಇವರಿಗೆ ಸಿಗಲಿವ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:

  • ಘಟಕದ ವೆಚ್ಚ : 4.75 ಲಕ್ಷ ರೂಪಾಯಿ
  • ಸಹಾಯಧನ : 4.25 ಲಕ್ಷ ರೂಪಾಯಿ
  • ಸಾಲ : 50,000 ರೂಪಾಯಿ (ಶೇ.4ರ ಬಡ್ಡಿ)

ಇದನ್ನೂ ಓದಿ: ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

ಅಂತರ್ಜಲ ಅಧಿಕವಾಗಿರುವ ಜಿಲ್ಲೆಗಳು

ಮೇಲ್ಕಾಣಿಸಿದ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳನ್ನು ಅಂತರ್ಜಲ ಅಧಿಕವಾಗಿರುವ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳ ಅರ್ಹ ರೈತರು ಕೂಡ 2 ರಿಂದ 5 ಎಕರೆ ಜಮೀನು ಹೊಂದಿರಬೇಕು. ಮಲೆನಾಡು, ಕರಾವಳು ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ರೈತರಿಗೆ 1 ಎಕರೆ ಜಮೀನು ಹೊಂದಿದ್ದರೂ ಸಾಕು. ಇವರಿಗೆ ಸಿಗಲಿವ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:

  • ಘಟಕದ ವೆಚ್ಚ : 3.75 ಲಕ್ಷ ರೂಪಾಯಿ
  • ಸಹಾಯಧನ : 3.25 ಲಕ್ಷ ರೂಪಾಯಿ
  • ಸಾಲ : 50,000 ರೂಪಾಯಿ (ಶೇ.4ರ ಬಡ್ಡಿ)

ಇದನ್ನೂ ಓದಿ: ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

Karnataka Ganga Kalyana Scheme 2024
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್
  • ಸಣ್ಣ/ಅತಿ ಸಣ್ಣ ರೈತರ ದೃಢೀಕರಣ ಪತ್ರ
  • ರೈತರ FID ಸಂಖ್ಯೆ. (ಇದನ್ನು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಪಡೆಯಬವುದು)
  • ಜಮೀನಿನ ಪಹಣಿ (RTC)
ಯಾವೆಲ್ಲ ಜಾತಿಯ ರೈತರು ಅರ್ಜಿ ಸಲ್ಲಿಸಬಹುದು?
  • ಹಿಂದುಳಿದ ವರ್ಗದ ರೈತರು: ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು
  • ಅಲ್ಪಸಂಖ್ಯಾತರ ವರ್ಗದ ರೈತರು: ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿ ಇತ್ಯಾದಿ ಸಮುದಾಯ ರೈತರು
  • ಪರಿಶಿಷ್ಟ ಜಾತಿ-ಪಂಗಡದ ರೈತರು: ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಒಳಪಡುವ ಹಾಗೂ ಈ ವರ್ಗದ ಉಪಜಾತಿಯ ಎಲ್ಲ ರೈತರು
  • ಲಿಂಗಾಯತ ರೈತರು: ವೀರಶೈವ ಲಿಂಗಾಯತ ಸಮುದಾಯಕ್ಕೆ ಒಳಪಡುವ ಎಲ್ಲ ರೀತಿಯ ಉಪ ಜಾತಿಯ ರೈತರು
  • ವಿಶ್ವಕರ್ಮ ಸಮುದಾಯದ ಬಡಗಿ, ಆಚಾರಿ, ಅಕ್ಕಸಾಲಿ, ಕಮ್ಮಾರ ಹಾಗೂ ಇತರ ಯಪಜಾತಿ ರೈತರು
  • ಉಪ್ಪಾರ ಸಮುದಾಯದ ಉಪ್ಪಾರ, ಬೆಲ್ದರ್, ಕಲ್ಲುಕುಟಿಗೆ ಉಪ್ಪಾರ, ಸುಣಗಾರ ಹಾಗೂ ಈ ಇತರ ಉಪಜಾತಿಯ ರೈತರು
  • ಆದಿ ಜಾಂಬವ ಸಮುದಾಯದ ಮಾದಿಗ ಮತ್ತು ಸಂಬ೦ಧಿತ ದಕ್ಕಲಿಗ, ಭಂಗಿ, ಜಾಡಮಾಲಿ, ಚಮಾರ್, ಸಮಗಾರ ಸೇರಿ ಇತರ ಉಪಜಾತಿ ರೈತರು
  • ಅಂಬಿಗರ ಸಮುದಾಯದ ಬೆಸ್ತ, ಅಂಬಿಗ, ಬಾರ್ಕಿ, ಗಂಗೆಮಕ್ಕಳು, ಗಂಗಾಮತ, ಜಲಗಾರ, ಕಬ್ಬೇರ್, ಕಬ್ಬಲಿಗ, ಕೋಳಿ, ಮೊಗವೀರ, ಖಾರ್ವಿ ಮತ್ತು ಇತರ ಉಪಜಾತಿ ರೈತರು
  • ಭೋವಿ ಸಮುದಾಯದ ಭೋವಿ, ವಡ್ಡರ್, ವಡ್ಡೆ, ಕಲ್ಲುವಡ್ಡರ್ ಮತ್ತು ಇತರ ಉಪಜಾತಿ ರೈತರು
  • ಸವಿತಾ ಸಮುದಾಯದ ಭಜಂತ್ರಿ, ಬಂಡಾರಿ, ಹಡಪದ, ಕೆಲಸಿ, ಕ್ಷೌರಿಕ, ನಾಡಿಗ, ನಾಪಿತ, ನಾವಿ ಮತ್ತು ಇತರ ಉಪಜಾತಿ ರೈತರು
  • ಮಡಿವಾಳ ಸಮುದಾಯದ ಮಡಿವಾಳ, ಅಗಸ, ಧೋಬಿ ಮತ್ತು ಇತರ ಉಪಜಾತಿ ರೈತರು

ಇದನ್ನೂ ಓದಿ: ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

31-08-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು; ಅಂಬಿಗ ಹಾಗೂ ಒಕ್ಕಲಿಗ ಸಮುದಾಯದ ರೈತರು ಅರ್ಜಿ ಸಲ್ಲಿಸಲು 30-08-2024 ಕೊನೆಯ ದಿನವಾಗಿದೆ.

ಇದನ್ನೂ ಓದಿ: Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…


Spread the love
WhatsApp Group Join Now
Telegram Group Join Now

Leave a comment

error: Content is protected !!