ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction

WhatsApp Group Join Now
Telegram Group Join Now
Spread the love

RBKMUL Farmers Milk Price Reduction : ಹೈನುಗಾರಿಕೆ ಸಂಕಷ್ಟದಲ್ಲಿ ಇರುವಾಗಲೇ ಹಾಲು ಒಕ್ಕೂಟಗಳ ದರ ಕಡಿತದ ಆದೇಶ ರೈತರನ್ನು ಕಂಗಾಲು ಮಾಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದ (Karnataka Milk Federation -KMF) ವಿವಿಧ ಜಿಲ್ಲಾ ಒಕ್ಕೂಟಗಳು ದರ ಕಡಿತ ಮಾಡುತ್ತಿದ್ದು; ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಪಶು ಆಹಾರದ ಬೆಲೆ ಹೆಚ್ಚಳವಾಗಿದೆ. ಮೇವು, ಔಷಧಿ ವೆಚ್ಚವೂ ದುಬಾರಿಯಾಗಿದೆ. ಹಾಲಿನ ಪ್ರೋತ್ಸಾಹಧನ ಕೂಡ ಸಕಾಲಕ್ಕೆ ಹೈನುಗಾರರ ಕೈ ಸೇರುತ್ತಿಲ್ಲ. ಬರ-ನೆರೆಯಿಂದ ತತ್ತರಿಸಿರುವ ರೈತರಿಗೆ ಹೈನುಗಾರಿಕೆ ಆಪತ್ತಿಗೆ ಆಸರೆಯಾಗಿದ್ದು; ಒಕ್ಕೂಟಗಳ ‘ದರ ಕಡಿತ’ದ ಆದೇಶ ಬರೆ ಎಳೆದಂತಾಗುತ್ತಿದೆ.

ಇದನ್ನೂ ಓದಿ: ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಸೌಲಭ್ಯಕ್ಕೆ ₹4.25 ಲಕ್ಷ ಆರ್ಥಿಕ ನೆರವು | ಆಗಸ್ಟ್ 30ರೊಳಗೆ ಅರ್ಜಿ ಹಾಕಿ… Karnataka Ganga Kalyana Scheme 2024

ಪ್ರತೀ ಲೀಟರ್’ಗೆ 1.5 ರೂಪಾಯಿ ದರ ಕಡಿತ

ಈವರೆಗೂ ಒಕ್ಕೂಟವು ರೈತರು ಮತ್ತು ಹೈನುಗಾರರಿಂದ ಪ್ರತಿ ಲೀಟರ್ ಹಾಲಿಗೆ 30.50 ರೂಪಾಯಿ ನೀಡಿ ಹಾಲು ಖರೀದಿ ಮಾಡುತ್ತಿತ್ತು. ಇದೀಗ ಏಕಾಏಕಿ 1.5 ರೂಪಾಯಿ ಬೆಲೆ ಕಡಿಮೆ ಮಾಡಲಾಗಿದ್ದು, ರೈತರಿಗೆ ಪ್ರತಿ ಲೀಟರ್ ಹಾಲಿಗೆ 29 ರೂಪಾಯಿ ನಿಗದಿ ಮಾಡಲಾಗಿದೆ.

ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (RBKMUL) ಈ ದರ ಕಡಿತದ ಆದೇಶ ಹೊರಡಿಸಿದ್ದು; ಸದರಿ ಒಕ್ಕೂಟ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಹೈನುಗಾರರು ಈ ದರ ಕಡಿತ ಆದೇಶವನ್ನು ಹಿಂಪಡೆಯುವAತೆ ಒತ್ತಾಯಿಸಿದ್ದಾರೆ.

RBKMUL Farmers Milk Price Reduction

ಇದನ್ನೂ ಓದಿ: ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

ನಷ್ಟವನ್ನು ಸರಿದೂಗಿಸಲು ದರ ಕಡಿತ

ಸದರಿ ಹಾಲು ಒಕ್ಕೂಟವು ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಸೇರಿ ನಾಲ್ಕೂ ಜಿಲ್ಲೆಗಳಿಂದ ನಿತ್ಯ 2.30 ಲಕ್ಷ ಲೀಟರ್ ಹಾಲು ಖರೀದಿ ಮಾಡುತ್ತಿದೆ. ಇದರಲ್ಲಿ ಹಾಲು, ಮೊಸರು, ಮಜ್ಜಿಗೆ ಸೇರಿ 1.60 ಲಕ್ಷ ಲೀಟರ್​ ಮಾತ್ರ ಮಾರಾಟವಾಗುತ್ತಿದೆ. ಉಳಿದ 60 ರಿಂದ 70 ಸಾವಿರ ಲೀಟರ್ ಹಾಲನ್ನು ಹಾಲಿನ ಪುಡಿ ತಯಾರಿಕೆಗೆ ಬಳಸಲಾಗುತ್ತಿದೆ.

ಸದ್ಯಕ್ಕೆ ವಿಶ್ವ ಮಾರುಕಟ್ಟೆಯಲ್ಲಿ ಹಾಲಿನ ಪುಡಿಗೆ 85 ರೂಪಾಯಿ ಮಾತ್ರವೇ ಧಾರಣೆ ಇದ್ದು; ಇದರಿಂದ ಒಕ್ಕೂಟ ನಷ್ಟದಲ್ಲಿದೆ. ನಷ್ಟವನ್ನು ಸರಿದೂಗಿಸಲು ದರ ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟ ಹೇಳಿದೆ. ಈ ನಿರ್ಧಾರದಿಂದ ಒಕ್ಕೂಟವು ಹಿಂದೆ ಸರಿಯಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ


Spread the love
WhatsApp Group Join Now
Telegram Group Join Now

1 thought on “ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction”

Leave a comment

error: Content is protected !!