Belevime Karnataka PMFBY : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ (Karnataka Raitha Suraksha Pradhana Mantri Fasal Bima Yojana) 2024-25ನೇ ಸಾಲಿನ ಮುಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅತಿಯಾದ ಮಳೆ, ಅತಿಯಾದ ಮಳೆ ಕೊರತೆ, ಚಂಡಮಾರುತದ೦ತಹ ಪ್ರಕೃತಿ ವಿಕೋಪಗಳಿಂದಾಗಿ ರೈತರು ಪದೇ ಪದೇ ನಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರೈತರನ್ನು ಇಂತಹ ನಿಸರ್ಗ ಸಹಜ ಅನಾಹುತಗಳಿಂದ ಪಾರು ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ರೈತರು ಸಕಾಲಕ್ಕೆ ಬೆಳೆ ವಿಮೆ ಮಾಡಿಸಿದರೆ ನೈಸರ್ಗಿ ವಿಪತ್ತುಗಳು ಸಂಭವಿಸಿದಾಗ ನಿಗದಿತ ವಿಮಾ ಪರಿಹಾರ ಪಡೆಯಬಹುದು. ಅಂದರೆ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದ ಉಂಟಾಗುವ ಹಾನಿ, ಪ್ರವಾಹ, ಅಕಾಲಿಕ ಮಳೆ, ಆಲಿಕಲ್ಲು ಮಳೆ, ಭೂ ಕುಸಿತ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.
ವಿಮೆ ಪರಿಹಾರ ಪಡೆಯಲು ಏನು ಮಾಡಬೇಕು?
ಹಾಗಂತ ಪ್ರೀಮಿಯಂ ಪಾವತಿಸಿದ ಮಾತ್ರಕ್ಕೆ ಬೆಳೆ ವಿಮಾ ಪರಿಹಾರ ರೈತರ ಕೈಸೇರುವುದಿಲ್ಲ. ಮೊದಲಿಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರು ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ನೀವು ಮೊಬೈಲ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು.
ಆನಂತರ ನೈಸರ್ಗಿಕ ವಿಪತ್ತಿನಿಂದ ವಿಮಾ ಮಾಡಿಸಿದ ಬೆಳೆ ಹಾಳಾದಾಗ ಮೂರು ದಿನಗಳಲ್ಲಿ ವಿಮೆ ಮಾಡಿದ ಕಂಪನಿಗೆ ಫೋನ್ ಮಾಡಿ ಮಾಹಿತಿ ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿ ಬೆಳೆ ಹಾಳಾದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ನಷ್ಟ ಪ್ರಮಾಣದ ಮಾಹಿತಿಯನ್ನು ಮೇಲಾಧಿಕಾರಿಗೆ ನೀಡುತ್ತಾರೆ. ಮುಂದೆ ಮೇಲಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಯೋಜನೆಯ ಉದ್ದೇಶವೇನು?
ಕೆಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ನಿರ್ವಹಣೆಯಲ್ಲಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2016ರ ಜನವರಿ 13ರಂದು ಘೋಷಿಸಲಾಗಿದೆ. ರೈತರಿಗೆ ಕಡಿಮೆ ಮೊತ್ತಕ್ಕೆ ವಿಮಾ ಪರಿಹಾರ ಒದಗಿಸುವ ಮೂಲಕ ರೈತರನ್ನು ಪ್ರಕೃತಿ ವಿಪತ್ತಿನಿಂದ ಪಾರು ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಆದರೆ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ರೈತರ ನೆರವಿಗೆ ಬರುತ್ತಿಲ್ಲ ಎಂಬ ಆಪಾದನೆ ಇದೆ. ರೈತರು ಕಟ್ಟಿದ ಪ್ರಿಮಿಯಂ ಮೊತ್ತದಷ್ಟೂ ವಿಮೆ ಪರಿಹಾರ ವಿತರಣೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ರೈತರಿಗೆ ನ್ಯಾಯಯುತ ವಿಮೆ ಪರಿಹಾರ ಸಿಗುವಂತೆ ಜಿಲ್ಲಾಧಿಕಾರಿಗಳು ಸಂಬAಧಪಟ್ಟ ಜಿಲ್ಲೆಯಲ್ಲಿ ಈ ಬಗ್ಗೆ ನಿಗಾ ವಹಿಸಬೇಕು.
ರೈತರು ಬೆಳೆ ವಿಮೆಗೆ ಸಂಬ೦ಧಿಸಿದ ಯಾವುದೇ ಮಾಹಿತಿ ಬೇಕಾದರೆ ತಮ್ಮ ಜಿಲ್ಲೆಯ ಬೆಳೆ ವಿಮೆ ಕಂಪನಿಯ ಸಿಬ್ಬಂದಿಗೆ ಫೋನ್ ಮಾಡಿ ಪಡೆಯಬಹುದಾಗಿದೆ. ಬೆಳೆ ವಿಮೆ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಪಡೆಯಲು 1800180 1551 ಉಚಿತ ಸಹಾವಾಣಿ ಕಾಲ್ ಮಾಡಿ…
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಒತ್ತಿ…
Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ
2 thoughts on “ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY”