ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

WhatsApp Group Join Now
Telegram Group Join Now
Spread the love

Agricultural Waste Management : ಈಗೀಗ ರೈತರಲ್ಲಿ ಕೃಷಿ ತ್ಯಾಜ್ಯವನ್ನು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಪರಿಸರಕ್ಕಾಗುವ ಹಾನಿ ಏನು? ಸ್ವತಃ ರೈತರಿಗೆ ಆಗುವ ನಷ್ಟ ಎಂಥದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಇಂದು ಕೃಷಿ ತ್ಯಾಜ್ಯವನ್ನು ಸಾರಾಸಗಟು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದಾಗಿ ಸಾಲುಸಾಲು ಅನಾಹುತಗಳು ಸೃಷ್ಟಿಯಾಗುತ್ತಿವೆ. ನಿಜಕ್ಕಾದರೆ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹೆಚ್ಚೆಂದರೆ ತ್ಯಾಜ್ಯಗಳನ್ನು ಸುಟ್ಟು ಅದರಿಂದ ನೈಸರ್ಗಿಕವಾಗಿ ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಬಹುದು.

ರೋಗಭರಿತ ಕೃಷಿ ತ್ಯಾಜ್ಯ ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಶತ್ರು ಕೀಟಗಳ ಮೊಟ್ಟೆ ಮತ್ತು ಕೋಶಗಳನ್ನು ನಾಶ ಮಾಡಬಹುದು. ಇಷ್ಟರ ಹೊರತಾಗಿ ಕೃಷಿ ತ್ಯಾಜ್ಯ ಸುಡುವುದರಿಂದ ಸಿಗುವ ಅನುಕೂಲ ಅಷ್ಟಕಷ್ಟೇ. ಆದರೆ ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಕೃಷಿತ್ಯಾಜ್ಯ ರೈತನ ನಿಜವಾದ ಸಂಪತ್ತೇ ಆಗಲಿದೆ.

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

ತ್ಯಾಜ್ಯ ಸುಡುವುದರಿಂದಾಗುವ ನಷ್ಟ!

ಹೌದು, ತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ 149.24 ಮಿ. ಟನ್‌ಗಳಷ್ಟು ಇಂಗಾಲದ ಡೈಆಕ್ಸೆöÊಡ್, 9 ಮಿ. ಟನ್‌ಗಳಷ್ಟು ಇಂಗಾಲದ ಮೊನಾಕ್ಸೆöÊಡ್, 0.25 ಮಿ. ಟನ್‌ಗಳಷ್ಟು ಗಂಧಕದ ಆಕ್ಸೆöÊಡ್ ಮತ್ತು 0.07 ಮಿ. ಟನ್‌ಗಳಷ್ಟು ಕಪ್ಪು ಇಂಗಾಲ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದರಿಂದ ಹಿಮಾಲಯ ಪರ್ವತದಲ್ಲಿರುವ ಮಂಜುಗಡ್ಡೆಗಳು ಕರಗುತ್ತಿವೆ ಮತ್ತು ಇದರಿಂದಲೇ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.

ತ್ಯಾಜ್ಯಗಳನ್ನು ಸುಡುವಾಗ ಅದರ ಶಾಖವು ಸುಮಾರು 1 ಸೆಂ.ಮೀ. ನಷ್ಟು ಭೂಮಿಯೊಳಗೆ ಹೋಗುವುದರಿಂದ ಮಣ್ಣಿನ ಉಷ್ಣಾಂಶವು ಸುಮಾರು 9o ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಮಣ್ಣಿನಲ್ಲಿರುವ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಭೂಮಿಯ ಫಲವತ್ತತೆಗೆ ಕಾರಣವಾದ ಜೀವಾಣುಗಳು ನಾಶವಾಗುವುದರಿಂದ ಭೂಮಿಯ ಫಲವತ್ತತೆ ನಶಿಸುತ್ತದೆ.

ತ್ಯಾಜ್ಯ ವಸ್ತುಗಳನ್ನು ಸುಟ್ಟ ಭೂಮಿಯಲ್ಲಿ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟ ನಾಶವಾಗುತ್ತದೆ. ಒಂದು ಅಂದಾಜಿನ ಪ್ರಕಾರ 01 ಟನ್ ತ್ಯಾಜ್ಯವನ್ನು ಸುಡುವುದರಿಂದ ಭೂಮಿಯಲ್ಲಿರುವ 5.5 ಕೆ.ಜಿ ಸಾರಜನಕ, 2.3 ಕೆ.ಜಿ ರಂಜಕ ಮತ್ತು 2.5 ಕೆ.ಜಿ ಪೋಟ್ಯಾಷ್ ಮತ್ತು 01 ಕೆ.ಜಿ. ಗಂಧಕ ನಾಶವಾಗುತ್ತದೆ.

ಇದರಿಂದ ಪೋಷಕಾಂಶಗಳ ಅಸಮತೋಲನ ಉಂಟಾಗುತ್ತದೆ. ಇದಲ್ಲದೆ ಮಣ್ಣಿನಲ್ಲಿರುವ ಸಾವಯವ ಇಂಗಾಲ ಕೂಡ ನಾಶವಾಗುತ್ತದೆ. ತ್ಯಾಜ್ಯಗಳನ್ನು ಸುಡುವಾಗ ಹೊರಹೊಮ್ಮುವ ಹೊಗೆಯಿಂದ ಜನರ ಕಣ್ಣು, ಮೂಗು, ಗಂಟಲಿನಲ್ಲಿ ನವೆ ಉಂಟಾಗುತ್ತದೆ.

Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…

ಅಸ್ತಮಾದAತಹ ಮಾರಕ ರೋಗಗಳಿಗೆ ಜನರು ತುತ್ತಾಗುತ್ತಾರೆ. ತ್ಯಾಜ್ಯಕ್ಕೆ ಹಚ್ಚಿದ ಕಿಚ್ಚಿನಿಂದ ಮಣ್ಣಿನಿಂದ ನೀರು ಆವಿಯಾಗುವ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನೀರಾವರಿಯ ವೆಚ್ಚ ಅಧಿಕವಾಗುತ್ತದೆ. ಕಳೆಗಳ ಸಂಖ್ಯೆ ಹೆಚ್ಚಾಗಿ ಕಳೆ ನಿರ್ವಹಣಾ ವೆಚ್ಚವೂ ಅಧಿಕವಾಗುತ್ತದೆ.

ಮಣ್ಣಿನ ಕೊಚ್ಚಣೆ ತೀವ್ರವಾಗಿ ನೀರು ಇಂಗುವಿಕೆ ಕಡಿಮೆಯಾಗುತ್ತದೆ. ತ್ಯಾಜ್ಯವನ್ನು ಸುಡುವುದರಿಂದ ಮಣ್ಣಿನಲ್ಲಿರುವ ಸಾವಯವ ಅಂಶ ನಾಶವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ನಷ್ಟವಾಗುತ್ತದೆ. ಅಲ್ಲದೇ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷಾö್ಮಣು ಜೀವಿಗಳು, ಎರೆಹುಳುಗಳು ಮತ್ತು ಅನೇಕ ಉಪಕಾರಿ ಜೀವಿಗಳು ನಾಶ ಹೊಂದಿ ಮಣ್ಣಿನ ಜೈವಿಕ ಕ್ರಿಯೆಯು ಇಳಿಮುಖವಾಗುತ್ತದೆ.

ಒಂದು ಅಂದಾಜಿನ ಪ್ರಕಾರ ತ್ಯಾಜ್ಯಗಳನ್ನು ಸುಡುವುದರಿಂದ 14 ರಿಂದ 28 ದಿನಗಳಲ್ಲಿ ಮಣ್ಣಿನಲ್ಲಿರುವ ಜೀವಾಣುಗಳ ವೈವಿಧ್ಯತೆ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ. ರೈತ ಮಿತ್ರ ಕೀಟಗಳು ನಾಶವಾಗಿ ಸಸ್ಯ ಸಂರಕ್ಷಣೆ ವೆಚ್ಚ ಹೆಚ್ಚಾಗುತ್ತದೆ. ಭೂಮಿಯಲ್ಲಿರುವ ಪರಾಗ ಸ್ಪರ್ಶಕ್ರಿಯೆ ನಡೆಸುವ ಕೀಟಗಳ ಮೊಟ್ಟೆ ಮತ್ತು ಕೋಶಗಳು ನಾಶವಾಗುತ್ತವೆ.

ತ್ಯಾಜ್ಯವನ್ನು ಸಂಪತ್ತಾಗಿಸುವ ಬಗೆ…

ಕೃಷಿ ತ್ಯಾಜ್ಯ ವಸ್ತು ಅತ್ಯಮೂಲ್ಯವಾದ ಸಾವಯವ ಸಂಪನ್ಮೂಲವಾಗಿದ್ದು ಅದನ್ನು ಸುಟ್ಟು ಹಾಳು ಮಾಡದೇ, ಜಮೀನಿನ ಮೇಲೆ ಹೊದಿಕೆಯಾಗಿ ಬಳಸಬಹುದು. ಉದಾರಣೆಗೆ: ಕಬ್ಬಿನ ರವದಿಯನ್ನು ಹೊದಿಕೆಯಾಗಿ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಕಬ್ಬಿನ ಇಳುವರಿ ಹೆಚ್ಚುತ್ತದೆ.

ಕಬ್ಬಿನ ರವದಿಯನ್ನು ಸುಡದೆ ಇಡಿಯಾಗಿ ಅಥವಾ ಯಂತ್ರಗಳ ಮೂಲಕ ಪುಡಿ ಮಾಡಿ ಭೂಮಿಗೆ ಹೊದಿಕೆಯಾಗಿ ಉಪಯೋಗಿಸಬಹುದು. ಅಥವಾ ಮಣ್ಣಿನಲ್ಲಿ ಸೇರಿಸಿ ಕಬ್ಬಿನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಇಳುವರಿ ಪಡೆಯುವುದರ ಜೊತೆಗೆ ಆರ್ಥಿಕ ಲಾಭ ಗಳಿಸಬಹುದು.

Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

ರೋಟವೇಟರ್‌ಗಳನ್ನು ಉಪಯೋಗಿಸಿ ತ್ಯಾಜ್ಯ ವಸ್ತುಗಳನ್ನು ಭೂಮಿಯಲ್ಲಿ ಸೇರಿಸಬಹುದು. ಅಷ್ಟೆಯಲ್ಲ ತ್ಯಾಜ್ಯ ವಸ್ತುಗಳನ್ನು ಜಾನುವಾರುಗಳಿಗೆ ಮೇವಾಗಿ, ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ, ಅಣಬೆ ಬೇಸಾಯಕ್ಕೆ, ಹಳ್ಳಿಗಳಲ್ಲಿ ಚಾವಣಿಗಾಗಿ, ಕಾಗದ ತಯಾರಿಕೆಗೆ, ಕಾರ್ಖಾನೆಗಳಲ್ಲಿ ಬಯೋ ಇಥೆನಾಲ್ ಉತ್ಪಾದನೆಗೆ ಉಪಯೋಗಿಸಬಹುದು.

ತ್ಯಾಜ್ಯವನ್ನು ಮುಚ್ಚುಗೆ ಅಥವಾ ಹೊದಿಕೆಯಾಗಿ ಬಳಸಿಕೊಳ್ಳುವ ಮೂಲಕ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಮಣ್ಣಿನ ತಾಪಮಾನ ಏರುಪೇರಾಗದೇ ತೇವಾಂಶ ಆವಿಯಾಗುವುದು ಕಡಿಮೆಯಾಗುತ್ತದೆ.ಮಣ್ಣಿನಲ್ಲಿ ಉಪಯುಕ್ತ ಸೂಕ್ಷö್ಮ ಜೀವಿಗಳ ಚಟುವಟಿಕೆ ಹೆಚ್ಚುತ್ತದೆ ಮತ್ತು ರೈತ ಮಿತ್ರ ಕೀಟಗಳು ಅಭಿವೃದ್ಧಿ ಹೊಂದುತ್ತವೆ. ಮಣ್ಣಿನ ಕೊಚ್ಚಣೆ ತಪ್ಪಿಸುತ್ತದೆ. ಮಣ್ಣಿನಲ್ಲಿ ನೀರು ಇಂಗುವಿಕೆಯನ್ನು ಹೆಚ್ಚಿಸುತ್ತದೆ. ಕಳೆಗಳ ನಿರ್ವಹಣೆ ಆಗುತ್ತದೆ.ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚಿ ಮಣ್ಣು ಫಲವತ್ತಾಗುತ್ತದೆ.

ಕೃಷಿ ತ್ಯಾಜ್ಯವನ್ನು ಹೊದಿಕೆಯಾಗಿ ಬಳಸುವುದರಿಂದ ಬೆಳೆಗಳ ಇಳುವರಿ ಹೆಚ್ಚಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಸಾರಜನಕ ಗೊಬ್ಬರವನ್ನು ಕೃಷಿ ತ್ಯಾಜ್ಯದ ಮೇಲೆ ಎರಚುವುದರಿಂದ ತ್ಯಾಜ್ಯದ ಇಂಗಾಲ ಮತ್ತು ಸಾರಜನಕದ ಅನುಪಾತ ಕಡಿಮೆಗೊಳಿಸಿ ಕಳೆಯುವಿಕೆ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬಹುದು.ಆದ್ದರಿಂದ ರೈತರು ಕೃಷಿ ತ್ಯಾಜ್ಯಗಳನ್ನು ಸದ್ಬಳಕೆ ಮಾಡಿಕೊಂಡು ಬೆಳೆಯ ಇಳುವರಿ ಹೆಚ್ಚಿಸುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡುವ ಕೆಲಸದಲ್ಲಿ ನಿರತರಾಗಬೇಕಿದೆ.


Spread the love
WhatsApp Group Join Now
Telegram Group Join Now
error: Content is protected !!