ಒಂದೇ ಜಮೀನಿನಲ್ಲಿ ಕೃಷಿ, ಪಶುಪಾಲನೆ, ಮೀನುಗಾರಿಕೆ | ನಿರಂತರ ಆದಾಯ ಗಳಿಕೆಯ ಸಂಯೋಜಿತ ಕೃಷಿ ಪದ್ಧತಿ… Benefits of Integrated Farming

WhatsApp Group Join Now
Telegram Group Join Now
Spread the love

Benefits of Integrated Farming : ಏಕ ಬೆಳೆ ಕೃಷಿಯಿಂದ ಮುಖ್ಯವಾಗಿ ಎರಡು ಸಮಸ್ಯೆಗಳು ಉದ್ಭವವಾಗುತ್ತವೆ. ಮೊದಲನೆಯದು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರಿಳಿತದಿಂದಾಗಿ (Price fluctuation of agricultural products) ರೈತ ತೀವ್ರ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಎರಡನೆಯದು ರೈತರ ಏಕ ಕೃಷಿ ಬೆಳೆಯು ಹೊಸ ಹೊಸ ರೋಗಕ್ಕೀಡಾಗುವುದರಿಂದ (new disease) ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಹಾನಿಗಳಿಗೆ ಸುಲಭವಾದ ಪರಿಹಾರ ಎಂದರೆ ಸುಸ್ಥಿರ, ಸಂಯೋಜಿತ ಕೃಷಿ ಪದ್ಧತಿ (Integrated Farming).

ಈ ಸುಸ್ಥಿರ ಸಂಯೋಜಿತ ಕೃಷಿ ಪದ್ಧತಿಯಲ್ಲಿ ರೈತರು ತಮ್ಮ ಜಮೀನಿನ ಅರ್ಧ ಭಾಗದಷ್ಟು ಸಸ್ಯ ಕೃಷಿಯನ್ನೂ, ಉಳಿದ ಅರ್ಧ ಭಾಗದಲ್ಲಿ ಮೀನು ಕೃಷಿಯನ್ನು ಒಳಗೊಂಡ ಪಶು ಸಂಗೋಪನೆಯನ್ನು ಮಾಡಬೇಕು. ಸಸ್ಯ ಕೃಷಿ ಹಾಗೂ ಮೀನು ಕೃಷಿಯನ್ನು ಒಳಗೊಂಡ ಪಶು ಸಂಗೋಪನೆಯಲ್ಲಿಯೂ ಕೂಡ ಏಕ ಬೆಳೆಗೆ ಪರ್ಯಾಯವಾಗಿ ವಿವಿಧ ಬೆಳೆಗಳನ್ನು ಬೆಳೆಯಬೇಕು. ಅಲ್ಲದೇ ಉತ್ತಮ ನಿರ್ವಹಣೆಗಾಗಿ ಯಾವುದೇ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯದೇ ಕಡಿಮೆ ಸಾಂದ್ರತೆಯ ಕೃಷಿ ಪದ್ಧತಿಯನ್ನು ಅನುಸರಿಸಬೇಕು.

ಇದನ್ನೂ ಓದಿ: ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction

ರೈತರಿಗೆ ಇದರಿಂದಾಗುವ ಲಾಭಗಳು

ಹಲಬಗೆಯ ಕೃಷಿ, ಮೀನು ಹಾಗೂ ಪಶು ಸಂಗೋಪನೆ ಉತ್ಪನ್ನಗಳಿರುವುದರಿಂದ, ಮಾರುಕಟ್ಟೆಯಲ್ಲಿ ಒಂದು ಉತ್ಪನ್ನದ ಬೆಲೆ ಕುಸಿದರೂ, ಬೇರೆ ಉತ್ಪನ್ನಗಳಿಂದ ಲಾಭ ಸಿಗುತ್ತದೆ.

ಉತ್ಪನ್ನಗಳಲ್ಲಿ ವೈವಿಧ್ಯತೆ ಇರುವುದರಿಂದ ಒಂದು ಉತ್ಪನ್ನವು ಹೊಸ ರೋಗದಿಂದÀ ಹಾನಿಗೀಡಾದರೂ, ಬೇರೆ ಉತ್ಪನ್ನಗಳು ಸುರಕ್ಷಿತವಾಗಿರುತ್ತವೆ. ತ್ಯಾಜ್ಯ ವಸ್ತುಗಳನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತನೆ ಮಾಡಬಹುದು.

ಕಡಿಮೆ ಅವಧಿಯ, ಮಧ್ಯಮ ಅವಧಿಯ ಹಾಗೂ ದೀರ್ಘಾವಧಿಯ ಲಾಭ ಮತ್ತು ನಿರಂತರ ಲಾಭ ಗಳಿಸಬಹುದು.

ಸಸ್ಯಗಳಿಗೆ ಬರುವ ರೋಗ ಪ್ರಾಣಿಗಳಿಗೆ ಬರುವುದಿಲ್ಲ ಹಾಗೂ ಪ್ರಾಣಿಗಳಿಗೆ ಬರುವ ರೋಗ ಸಸ್ಯಗಳಿಗೆ ಬರುವುದಿಲ್ಲ. ಇದರಿಂದ ಹೊಸ ರೋಗಗಳಿಂದ ರೈತರಿಗೆ ಕೆಲವು ಬೆಳೆ ನಷ್ಟವಾದರೂ ಇತರ ಬೆಳೆಗಳಿಂದ ಮತ್ತು ಪ್ರಾಣಿ ಉತ್ಪನ್ನಗಳಿಂದ ಲಾಭವಾಗುವುದು.

ಇದನ್ನೂ ಓದಿ: ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | ಸೆಪ್ಟೆಂಬರ್ 15ರ ವರೆಗೂ ಅವಕಾಶ Date extension for Development Corporation Schemes

Benefits of Integrated Farming
ಸಸ್ಯ ಕೃಷಿಯಲ್ಲಿ…

ರೈತರು ಸ್ವಲ್ಪ ಜಮೀನಿನಲ್ಲಿ ದೀರ್ಘಾವಧಿಯ ಅರಣ್ಯ ಕೃಷಿಯ ಬೆಳೆಗಳಾದ ಹೊನ್ನೆ, ಮತ್ತೆ, ಬೀಟೆ, ಸಾಗವಾನಿ, ಸಿಲ್ವರ್ ಓಕ್, ಶ್ರೀಗಂಧ, ರಕ್ತ ಚಂದನ, ಹೆಬ್ಬೇವು, ಬೇವು ಮುಂತಾದವುಗಳನ್ನು ಬೆಳೆಸಬೇಕು.

ಇನ್ನು ಸ್ವಲ್ಪ ಜಮೀನಿನಲ್ಲಿ ರೋಗ ಕಡಿಮೆ ಇರುವ ಹಣ್ಣಿನ ಗಿಡಗಳಾದ ಸಪೋಟಾ, ಸೀಬೆ ಕಾಯಿ, ಹಲಸು, ಮಾವು, ಬಾಳೆ, ನಿಂಬೆ, ಗಜ ನಿಂಬೆ ಇತ್ಯಾದಿಗಳನ್ನು ಬೆಳೆಸಬೇಕು. ಇನ್ನು ಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆಸಬೇಕು.ಇನ್ನು ಸ್ವಲ್ಪ ಜಮೀನಿನಲ್ಲಿ ಹೂವಿನ ಬೆಳೆಗಳನ್ನು ಹಾಕಬೇಕು.

ಇದನ್ನೂ ಓದಿ: ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಸೌಲಭ್ಯಕ್ಕೆ ₹4.25 ಲಕ್ಷ ಆರ್ಥಿಕ ನೆರವು | ಆಗಸ್ಟ್ 30ರೊಳಗೆ ಅರ್ಜಿ ಹಾಕಿ… Karnataka Ganga Kalyana Scheme 2024

ಮೀನು ಕೃಷಿಯಲ್ಲಿ…

ರೈತರು ಮೀನು ಕೊಳಗಳನ್ನು ವಿವಿಧೋದ್ದೇಶ ಕೊಳಗಳನ್ನಾಗಿ ನಿರ್ಮಾಣ ಮಾಡಬೇಕು. ತಮ್ಮ ಜಮೀನಿನ ಅತ್ಯಂತ ಎತ್ತರದ ಪ್ರದೇಶದಲ್ಲಿ ಮೀನು ಕೊಳ ನಿರ್ಮಾಣ ಮಾಡಬೇಕು. ನೀರು ನಿಲ್ಲುವ ಮಣ್ಣು ಇದ್ದರೆ 5 ಅಡಿ, ಇಲ್ಲದಿದ್ದರೆ 6 ಅಡಿ ಗುಂಡಿ ತೋಡಿಸಬೇಕು. ಜಮೀನಿನ ಮಟ್ಟದಲ್ಲಿ, ಜಮೀನಿನ ಭಾಗದಲ್ಲಿ ನೀರಾವರಿಗಾಗಿ ಪೈಪ್ ಹಾಕಬೇಕು. ಮಳೆ ನೀರಿನ ಕೊಯ್ಲಿಗಾಗಿ ಮಳೆ ನೀರು ಬರುವ ಹತ್ತಿರ ಜಮೀನಿನ ಮಟ್ಟದಲ್ಲಿ ಇನ್ನೊಂದು ಪೈಪ್ ಹಾಕಬೇಕು. ನಂತರ 6 ಅಡಿ ಎತ್ತರಕ್ಕೆ ಕೊಳದ ಸುತ್ತಲೂ ಬದುವು ನಿರ್ಮಾಣ ಮಾಡಬೇಕು.

ಬದುವಿನ ಮೇಲೆ ಬೋರ್‌ವೆಲ್‌ನಿಂದ ಒಳಹರಿವಿನ ಪೈಪ್‌ನ್ನು ಹಾಕಬೇಕು. ನೀರು ನಿಲ್ಲದಿದ್ದರೆ, ಕೊಳದ ಪೂರ್ತಿ ಟರ್ಪಲೀನ್ ಶೀಟ್ ಹಾಕಬೇಕು. ಈಗ ಜಮೀನಿನ ಮೇಲ್ಭಾಗದ 5 ಅಡಿ ನೀರು ವ್ಯವಸಾಯಕ್ಕೆ ಬಳಸಬಹುದು. ಈ ರೀತಿ ಮಾಡುವುದರಿಂದ ರೈತರಿಗೆ ವಿದ್ಯುತ್ ಉಳಿತಾಯವಾಗುತ್ತದೆ.

ಅಲ್ಲದೇ, ನೀರನ್ನು ವ್ಯವಸಾಯಕ್ಕಾಗಿ ಬಳಸಲು ಯಾವುದೇ ಪಂಪ್ ಸೆಟ್‌ನ ಅಗತ್ಯವಿರುವುದಿಲ್ಲ. ನೀರು ತಾನಾಗಿಯೇ ಗುರುತ್ವಾಕರ್ಷಣ ಬಲದಿಂದ ಕೃಷಿ ಭೂಮಿಗೆ ಹರಿದು ಹೋಗುತ್ತದೆ. ಜಮೀನಿನ ಕೆಳ ಭಾಗದಲ್ಲಿರುವ 5 ಅಡಿ ನೀರು ಯಾವಾಗಲೂ ಮೀನು ಪಾಲನೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಜಮೆಗೆ ಕೃಷಿ ಇಲಾಖೆ ಸೂಚನೆ | ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ PM Kisan Samman Nidhi Mobile Updation

ಯಾವಾಗಲೂ ಮಿಶ್ರತಳಿ ಮೀನು ಪಾಲನೆ ಮಾಡಬೇಕು. ಸಾಕಾಣಿಕೆಗೆ ಸೂಕ್ತವಾದ ಕಾಟ್ಲಾ, ರೋಹು, ಮೃಗಾಲ್, ಅಮುರ್ ಸಾಮಾನ್ಯ ಗೆಂಡೆ, ಸಾಮಾನ್ಯ ಗೆಂಡೆ, ಗಿಫ್ಟ ತಿಲಾಪಿಯಾ ಮುಂತಾದ ತಳಿ ಮೀನುಗಳನ್ನು ಬಿತ್ತನೆ ಮಾಡಬೇಕು. ಪ್ರತಿ ಕಾಲು ಎಕರೆಯ ಕೊಳಕ್ಕೆ ಸುಮಾರು 1,500 ರಿಂದ 2,000 ಮೀನು ಮರಿ ಬಿತ್ತನೆ ಮಾಡಬೇಕು.

ಪ್ರತಿ ಕಾಲು ಎಕರೆಗೆ ಪ್ರತಿ ತಿಂಗಳು 100 ಕೆ.ಜಿ. ಹಸಿಯಾದ ದನದ ಸಗಣಿ, 30 ಕೆ.ಜಿ ಸುಣ್ಣ ಮತ್ತು 15 ಕೆ.ಜಿ. ಎನ್.ಪಿ.ಕೆ. ರಸಗೊಬ್ಬರಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ಬಗ್ಗಡವನ್ನು ಕೊಳದ ಸುತ್ತಲೂ ನೀರಿನಲ್ಲಿ ಹರಡಬೇಕು. ಇದರಿಂದ ಉತ್ಪನ್ನವಾಗುವ ಸೂಕ್ಷö್ಮಜೀವಿಗಳಾದ ಪ್ಲಾಂಕ್ಟನ್‌ಗಳನ್ನು ಮೀನು ಮರಿಗಳು ಆಹಾರವಾಗಿ ಸ್ವೀಕರಿಸಿ ಬೆಳೆಯುತ್ತವೆ.

ಇದರ ಜೊತೆಗೆ, ಪಾರಕ ಆಹಾರವಾಗಿ ಕಡಲೆಕಾಯಿ ಹಿಂಡಿ ಮತ್ತು ಅಕ್ಕಿ ತೌಡನ್ನು ಸಮಪ್ರಮಾಣದಲ್ಲಿ ಬೆರೆಸಿ ಪೂರಕ ಆಹಾರವಾಗಿ ಕೊಡಬಹುದು. ಮೊದಲ ಮೂರು ತಿಂಗಳು ಪಕ್ಷಿಗಳ ಕಾಟ ಇರುವುದರಿಂದ ಕೊಳದ ಮೇಲೆ ಬಲೆ ಹಾಕಬೇಕು. ರೈತರು ಮೀನು ಕೊಳಗಳ ನಿರ್ಮಾಣಕ್ಕಾಗಿ ಮೀನುಗಾರಿಕೆ ಇಲಾಖೆಯು ಸಬ್ಸಿಡಿ ರೂಪದಲ್ಲಿ ನೀಡುವ ಆರ್ಥಿಕ ಸಹಾಯವನ್ನು ಪಡೆಯಬಹುದು.

ರೈತರಿಗೆ ಪ್ರತಿ ಕೆ.ಜಿ. ಮೀನಿಗೆ ಸುಮಾರು 50 ರೂಪಾಯಿಯಿಂದ 120 ರೂಪಾಯಿ ವರೆಗೆ ಮಾರಾಟ ಬೆಲೆ ಸಿಗುತ್ತದೆ. ಕಾಲು ಎಕರೆ ಕೊಳದಲ್ಲಿ ಮೀನು ಪಾಲನೆ ಮಾಡುವುದರಿಂದ, ರೈತರಿಗೆ ಪ್ರತಿ ವರ್ಷಕ್ಕೆ 1 ಲಕ್ಷದ ವರೆಗೆ ಆದಾಯವಿದೆ. ರೈತರು ಮೀನು ಕೊಳ ನಿರ್ಮಾಣದ ವೆಚ್ಚವನ್ನು ಎರಡೇ ಮೀನಿನ ಬೆಳೆಯಲ್ಲಿ ತೆಗೆಯಬಹುದು.

ಇದನ್ನೂ ಓದಿ: ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

ಪಶು ಸಂಗೋಪನೆಯಲ್ಲಿ…

ರೈತರು ಪಶು ಸಂಗೋಪನೆಯಲ್ಲಿ ನಾಟಿ ಹಸುಗಳ ತಳಿಗಳಾದ ಮಲ್ನಾಡ್ ಗಿಡ್ಡ, ಅಮೃತ್ ಮಹಲ್, ಹಳ್ಳೀಕಾರ್, ದೇವಣಿ ಮುಂತಾದವುಗಳನ್ನು ಸಾಕಬಹುದು. ಜೊತೆಗೆ ನಾಟಿ ಎಮ್ಮೆಗಳನ್ನು ಸಾಕಬಹುದು. ಅಲ್ಲದೇ ಮೇಕೆ ತಳಿಗಳಾದ ಜಮುನಾಪಾರಿ, ಬೀಟಲ್, ಬರ್ಬಾರಿ, ಬೆಂಗಾಲ್, ಸಿರೋಹಿ, ಡೆಕ್ಕನಿ ಇವುಗಳನ್ನು ಪಾಲನೆ ಮಾಡಬಹುದು.

ಮೇವಿನ ಬೆಳೆಗಳಿಗೆ ಜಮೀನಿನ ಸ್ವಲ್ಪ ಜಾಗವನ್ನು ಮೀಸಿಲಿಡಬೇಕು. ಕೋಳಿಗಳಲ್ಲಿ ಬ್ರೋಯ್ಲರ್ ಮತ್ತು ಲೇಯರ್ ಕೋಳಿ ತಳಿಗಳಾದ ವನರಾಜ, ಗಿರಿರಾಜ ಮತ್ತು ಸ್ವರ್ಣಧಾರಾ ತಳಿಗಳನ್ನು ಪಾಲನೆ ಮಾಡಬಹುದು.

ಇದಲ್ಲದೆ ರೈತರು ಗೋಬರ್ ಗ್ಯಾಸ್ (ಅಡುಗೆ ಅನಿಲ) ಉತ್ಪನ್ನ ಮಾಡಬಹುದು. ಜೊತೆಗೆ ಎರೆಹುಳು ಗೊಬ್ಬರ ಮತ್ತು ಅಝೋಲಾ ಕೂಡಾ ಉತ್ಪಾದನೆ ಮಾಡಬಹುದು. ಆದರೆ, ಸುಸ್ಥಿರ ಲಾಭಕ್ಕಾಗಿ ರೈತರು ಯಾವುದೇ ಕೃಷಿ ಬೆಳೆಯನ್ನಾಗಲಿ, ಮೀನು ಕೃಷಿಯನ್ನಾಗಲಿ ಅಥವಾ ಪಶು ಸಂಗೋಪನೆಯನ್ನಾಗಲಿ ಅತೀ ಹೆಚ್ಚಿನ ಸಾಂದ್ರತೆ ಕೃಷಿ ಪದ್ಧತಿಯನ್ನಾಗಿ ಮಾಡಬಾರದು.

ಇದನ್ನೂ ಓದಿ: ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management


Spread the love
WhatsApp Group Join Now
Telegram Group Join Now

1 thought on “ಒಂದೇ ಜಮೀನಿನಲ್ಲಿ ಕೃಷಿ, ಪಶುಪಾಲನೆ, ಮೀನುಗಾರಿಕೆ | ನಿರಂತರ ಆದಾಯ ಗಳಿಕೆಯ ಸಂಯೋಜಿತ ಕೃಷಿ ಪದ್ಧತಿ… Benefits of Integrated Farming”

Leave a comment

error: Content is protected !!