ಉದ್ಯೋಗದ ಕೊಡಿಸುವ ವಂಚಕರಿಂದ ಹುಶಾರ್ | ಮೋಸದ ಉದ್ಯೋಗ ಜಾಲದಿಂದ ಪಾರಾಗಲು ಹೀಗೆ ಮಾಡಿ… Beware of job scams

WhatsApp Group Join Now
Telegram Group Join Now
Spread the love

Beware of job scams : ಸರಕಾರಿ ಉದ್ಯೋಗ, ಪ್ರತಿಷ್ಠಿತ ಕಂಪನಿ ಹುದ್ದೆ, ಮನೆಯಲ್ಲಿಯೇ ಕೆಲಸ, ಲಕ್ಷ ಲಕ್ಷ ಸಂಬಳ ಇತ್ಯಾದಿ ಮೋಡಿ ಆಮಿಷಗಳ ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಮೋಸದ ಜಾಲವನ್ನು (Fraudulent employment network)  ಪತ್ತೆ ಹಚ್ಚುವುದು ಹೇಗೆ? ಇವುಗಳ ಮೋಸಕ್ಕೆ ಬಲಿಯಾಗದಂತೆ ಪಾಲಿಸಬೇಕಾದ ನಿಯಮಗಳೇನು? ಮೋಸದ ಜಾಲಗಳ ಅಸಲಿ ಹಕೀಕತ್ತೇನು? ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಪೋಷಕರು ತಿಳಿಯಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

ಉದ್ಯೋಗ ಕೊಡುವ ನೆಪದಲ್ಲಿ ವಂಚಿಸುವ (job cheating) ಮೋಸದ ಜಾಲಗಳು ದೇಶಾದ್ಯಂತ ಸಕ್ರೀಯವಾಗಿವೆ. ಸ್ಥಳೀಯವಾಗಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಂಚಕರ ಗ್ಯಾಂಗ್ ಉದ್ಯೋಗದ ಆಮೀಷ ತೋರಿಸಿ ಅಭ್ಯರ್ಥಿಗಳನ್ನು ಅತೀ ಸುಲಭವಾಗಿ ಖೆಡ್ಡಾಕ್ಕೆ ಬೀಳಿಸುತ್ತಿವೆ. ಇವರ ವಂಚನಾ ವರ್ತುಲಕ್ಕೆ ಸಿಲುಕಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಹಣ, ಸಮಯನ್ನಷ್ಟೇ ಅಲ್ಲದೇ, ಮಾನ-ಮರ್ಯಾದೆಯನ್ನೂ ಕೂಡ ಕಳೆದುಕೊಳ್ಳುತ್ತಿದ್ದಾರೆ.

ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

ತೀರಾ ಇತ್ತೀಚೆಗೆ ರೈಲ್ವೆ ಉದ್ಯೋಗ ಕೊಡಿಸುವ ನೆಪದಲ್ಲಿ ತಮಿಳುನಾಡಿನ 28 ಯುವಕರಿಗೆ ವಂಚಿಸಿರುವ ಘಟನೆ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಈ 28 ಯುವಕರಿಗೆ ಪ್ರತಿ ದಿನ ನವದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಪ್ಲಾಟ್‌ಫಾರ್ಮ್ಗಳಲ್ಲಿ ನಿಂತು, ಅಲ್ಲಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳನ್ನು ಎಣಿಸಲು ನಿಯೋಜಿಸಲಾಗಿತ್ತು. ಆದರೆ ಇದೊಂದು ಹಗರಣವಾಗಿದ್ದು, ತಾವು ಮೋಸ ಹೋಗುತ್ತಿದ್ದೇವೆ ಎಂದು ತಿಳಿಯದೇ ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಕಿಡಿಗೇಡಿಗಳು ಒಟ್ಟು 2.6 ಕೋಟಿಯನ್ನು ಬಾಚಿಕೊಂಡು ಎಸ್ಕೇಪ್ ಆಗಿದ್ದಾರೆ.

ಇಂತಹ ಪ್ರಕರಣಗಳು ನಮ್ಮ ನಿಮ್ಮ ಊರುಗಳಿಂದ ಹಿಡಿದು ರಾಜ್ಯದ ಬೇರೆ ಬೇರೆ ಜಿಲ್ಲೆ, ಬೇರೆ ಬೇರೆ ರಾಜ್ಯ, ದೇಶದಾದ್ಯಂತ ನಡೆಯುತ್ತಲೇ ಇವೆ. ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು ಈ ಮೋಸದ ಜಾಲಗಳ ನಕಲಿ ಆಟಕ್ಕೆ ತಮ್ಮ ಭವಿಷ್ಯವನ್ನೇ ಮಂಕು ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ಸೇರಿ ಭಾರತದಾದ್ಯಂತ ಸಾವಿರಾರು 420 ಕೇಸ್‌ಗಳು ದಾಖಲಾಗುತ್ತಿವೆ. ಕರ್ನಾಟಕದಲ್ಲಿ ವರ್ಷಕ್ಕೆ 6,000 ವಂಚನೆ ಪ್ರಕರಣಗಳು ವರದಿಯಾಗುತ್ತಿವೆ.

Beware of job scams

ಸ್ಥಳೀಯ ಮೋಸದ ಜಾಲಗಳು ನಕಲಿ ವೆಬ್‌ಸೈಟ್ ಸೃಷ್ಟಿಸಿ, ಉದ್ಯೋಗ ಇರುವುದಾಗಿ ಜಾಲತಾಣದಲ್ಲಿ ಜಾಹೀರಾತು ಕೊಡುವ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸುತ್ತಿವೆ. ನೋಂದಣಿ, ಸಂದರ್ಶನದ ಶುಲ್ಕಗಳ ಹೆಸರಲ್ಲಿ ಆರಂಭದಲ್ಲೇ ಹಣ ಕಟ್ಟಿಸಿಕೊಂಡು ನಾಪತ್ತೆಯಾಗುತ್ತವೆ. ಈ ಕಪಟಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ತಾತ್ಕಾಲಿಕವಾಗಿ ಸ್ಥಳೀಯ ಏಜೆನ್ಸಿ ಕಚೇರಿ ಕೂಡ ಸ್ಥಾಪನೆ ಮಾಡಿ ನಂಬಿಸುತ್ತವೆ. ಸಿಬಿಐ, ಐಟಿ, ರೈಲ್ವೆ ಇಲಾಖೆಗಳಂತಹ ಸರ್ಕಾರಿ ಉದ್ಯೋಗದ ಹೆಸರಲ್ಲಿ ಅರ್ಜಿ ಆಹ್ವಾನಿಸಿ ಸರಿಯಾಗಿ ನಾಮ ತೀಡುತ್ತವೆ.

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

ಹಾಗಿದ್ದರೆ ಈ ಮೋಸದ ಜಾಲಗಳನ್ನು ಪತ್ತೆ ಹಚ್ಚುವುದು ಹೇಗೆ? ಇವುಗಳು ಕೊಡುವ ಉದ್ಯೋಗ ಆಮೀಷಕ್ಕೆ ಬಲಿಯಾಗದೇ ಪ್ರಾರಂಭದಲ್ಲಿಯೇ ಗುರುತಿಸಿ ಸೇಫ್ ಆಗುವುದು ಹೇಗೆ? ಇಷ್ಟಕ್ಕೂ ಮೋಸದ ಉದ್ಯೋಗ ಜಾಲಗಳ ಅಸಲಿಯತ್ತನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹುತೇಕ ಉದ್ಯೋಗಾಕಾಂಕ್ಷಿಗಳ ಪ್ರಶ್ನೆ.

ಸಾಮಾನ್ಯವಾಗಿ ಇಂದು ಸರಕಾರಿ ಅಥವಾ ಖಾಸಗಿ ಯಾವುದೇ ವಲಯದ ಉದ್ಯೋಗ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಕರೆಯುವುದುಂಟು. ಹೀಗಾಗಿ ಆನ್‌ಲೈಲ್ ವೆಬ್ ವಿಳಾಸವನ್ನು ಮೊದಲಿಗೆ ಎಚ್ಚರಿಕೆಯಿಂದ ಗಮನಿಸಬೇಕು. ಸರ್ಚ್ ಇಂಜಿನ್, ಸೋಷಿಯಲ್ ಮೀಡಿಯಾ ಜಾಹೀರಾತು ಲಿಂಕ್‌ಗಳನ್ನು ಪ್ರಾಮಾಣಿಕರಿಸದೇ ನಂಬುವುದು ಹುಂಬತನ. ಅರ್ಜಿ ಸಲ್ಲಿಸುವ ಮುನ್ನ ವೆಬ್‌ಸೈಟ್ ಅಸಲಿಯೋ ನಕಲಿಯೋ ಎಂಬುವುದನ್ನು ಖಚಿತಪಡಿಸಿಕೊಂಡೇ ಮುಂದುವರೆಯಿರಿ.

ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳಿಗೆ gov.in/nic.in ವಿಳಾಸ ಇರುತ್ತದೆ. ಇದನ್ನು ಮೊದಲು ಗಮನಿಸಿಯೇ ಅರ್ಜಿ ಸಲ್ಲಿಸುವುದು ಕ್ಷೇಮಕರ. ಇನ್ನು ಸರಕಾರಿ ಉದ್ಯೋಗ ಅಥವಾ ಖಾಸಗಿ ವಲಯದ ಕಂಪನಿಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಮಾತ್ರವೇ ಜಾಹೀರಾತು ನೀಡಲಾಗುತ್ತದೆ.

ಅಸಲಿ ಕಂಪನಿಗಳ ಇ-ಮೇಲ್ ವಿಳಾಸ ಸಾಮಾನ್ಯವಾಗಿ info@
company.net/info@ company.com ಆಗಿರುತ್ತದೆ. ಇದರ ಬದಲು info@companie.com/info@ compaany.com ಎಂದು ವ್ಯಾಕರಣ ದೋಷವಿದ್ದರೆ ಅದು ನಕಲಿ ಜಾಲ ಎಂದೇ ಭಾವಿಸುವುದು ಉತ್ತಮ.

Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…

ಗಮನಾರ್ಹವೆಂದರೆ ಶುಲ್ಕದ ಹೆಸರಲ್ಲಿ ಯಾವ ಕಂಪನಿಯೂ ಹಣ ಕೇಳುವುದಿಲ್ಲ. ಹೀಗಾಗಿ ಉದ್ಯೋಗ ಕೊಡಿಸುವುದಾಗಿ ಹಣ ಕೇಳಿಕೊಂಡು ಇ-ಮೇಲ್ ಸಂದೇಶ ಅಥವಾ ವಾಟ್ಸ್ ಆಪ್ ಸಂದೇಶ ಬಂದರೆ ನಂಬಬೇಡಿ. ಆನ್‌ಲೈನ್ ಇಂಟರ್‌ವ್ಯೂ ಮುನ್ನ ಇತ್ತೀಚೆಗೆ ಸಾಕಷ್ಟು ಕಂಪನಿಗಳು ಟೆಲಿಫೋನ್, ಚಾಟ್ ಸರ್ವೀಸ್, ಸ್ಟೆöÊಪ್ ಕಾಲ್, ಗೂಗಲ್ ಹ್ಯಾಂಗೌಟ್‌ನಲ್ಲೇ ಇಂಟರ್‌ವ್ಯೂ ಮಾಡುತ್ತಿವೆ. ಸಂದರ್ಶನಕ್ಕೆ ಮುನ್ನ ಕಂಪನಿ ಹಾಗೂ ಸಂದರ್ಶಕರ ಬಗ್ಗೆ ಕೂಲಕುಂಶ ಮಾಹಿತಿ ತಿಳಿದುಕೊಳ್ಳುವುದು ಸುರಕ್ಷಿತ.

ಯಾವುದೇ ದೇಶದಿಂದ ಉದ್ಯೋಗದ ಆಫರ್ ಬಂದಾಗ ಉದ್ಯೋಗದ ಆಹ್ವಾನ ನೀಡಿದ ಸಂಸ್ಥೆ ಹಾಗೂ ವ್ಯಕ್ತಿಗಳ ಕುರಿತಾಗಿ ಸಮಗ್ರ ಮಾಹಿತಿ ಪಡೆದು ವ್ಯವಹಾರ ಮುಂದುವರೆಸುವುದು ಉತ್ತಮ. ಏಕೆಂದರೆ ಈಗೀಗ ವಿದೇಶಗಳಲ್ಲೂ ಉದ್ಯೋಗ ಕೊಡಿಸುವ ದಮಧೆ ಶುರುವಾಗಿದೆ.

ಅಸ್ತಿತ್ವದಲ್ಲಿಲ್ಲದ ಐಟಿ ಕಂಪನಿಗಳನ್ನು ಸೃಷ್ಟಿಸಿ, ಆ ಹೆಸರಲ್ಲೇ ಆನ್‌ಲೈನ್ ಇಂಟರ್‌ವ್ಯೂ ಮಾಡಿ ಮೋಸ ಮಾಡಲಾಗುತ್ತಿದೆ. ಒಂದೇ ಬಾರಿ ಮಾತುಕತೆಗೆ ಉದ್ಯೋಗ ನೀಡುವ ಆಮೀಷ, ಮೊಬೈಲ್‌ನಲ್ಲೇ ಆಫರ್ ಕೊಡುವುದು ಇವೆಲ್ಲ ನಂಬಬೇಡಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಈ ಹುದ್ದೆಗಳಿಗೆ ನೀವು ಸೂಕ್ತರೇ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ


Spread the love
WhatsApp Group Join Now
Telegram Group Join Now

Leave a comment

error: Content is protected !!