Dairy Farming and Vermicompost Production free Training : ವಸತಿ, ಉಟೋಪಚಾರ ಸಹಿತ ಹೈನುಗಾರಿಕೆ (Dairy Farming) ತರಬೇತಿಗೆ ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಸರು ನೋಂದಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರ ಸ್ವಾವಲಂಬಲೆಗಾಗಿ ಅನೇಕ ಸ್ವಯಂ ಉದ್ಯೋಗಗಳಿದ್ದು; ಈ ವೃತ್ತಿಯಲ್ಲಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬನೆ ಜೀವನ ನಡೆಸಬಹುದಾಗಿದೆ. ಬಹುಮುಖ್ಯವಾಗಿ ರೈತರು ಮತ್ತು ರೈತ ಮಕ್ಕಳು ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೊಲ, ಹಂದಿ ಸಾಕಾಣಿಕೆ ತರಬೇತಿ ಪಡೆದು ಸುಸ್ಥಿರ ಆದಾಯ ಗಳಿಸಬಹುದಾಗಿದೆ.
ತರಬೇತಿ ಪಡೆಯುವ ಮೂಲಕ ಪಶುಪಾಲನೆ ಆರಂಭಿಸಿದರೆ ಸಾಲ ಸೌಲಭ್ಯ, ಸಹಾಯಧನ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಈ ಹಿನ್ನಲೆಯಲ್ಲಿ ವಿವಿಧ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ವಸತಿ, ಊಟೋಪಚಾರ ಸಹಿತ ಉಚಿತ ತರಬೇತಿಗಳನ್ನು ನಡೆಸುತ್ತಿವೆ. ಆಸಕ್ತ ರೈತರು ಈ ತರಬೇತಿಯ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದ ಧಾರವಾಡದ ರುಡ್ಸೆಟ್ ಸಂಸ್ಥೆಯು (RUDSET Institute Dharwad) ಸೆಪ್ಟೆಂಬರ್ 17ರಿಂದ 26ರ ವರೆಗೆ ಒಟ್ಟು 10 ದಿನಗಳ ಕಾಲ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬಿಪಿಎಲ್ ಅಥವಾ ಅಂತ್ಯೋದಯ ಇಲ್ಲವೇ ಎನ್ಆರ್ಇಜಿ ಕಾರ್ಡ್ ಹೊಂದಿರುವ ಕುಟುಂಬದ 18ರಿಂದ 45 ವರ್ಷದೊಳಗಿನ ನಿರುದ್ಯೋಗಿಗಳು ಹೆಸರು ನೋಂದಣಿ ಮಾಡಿಕೊಳ್ಳಬಹುದು.
ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮುಂಜಾನೆ 10ರಿಂದ ಸಂಜೆ 6 ಗಂಟೆಯ ಒಳಗೆ ಮೊ: 9008448418, 9743186978 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction