Gram Panchayat Library Supervisor Recruitment 2024 : ಜಿಲ್ಲಾ ಪಂಚಾಯತ್ ಅಡಿಯಲ್ಲಿರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಖಾಲಿ ಇರುವ ಮೇಲ್ವಿಚಾರಕರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿದ್ದು, ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಹಾವೇರಿ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಹಾನಗಲ್, ಬ್ಯಾಡಗಿ ಹಾಗೂ ಸವಣೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪಂಚಾಯತ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಅರ್ಹತೆ, ವಯೋಮಿತಿ, ಸಂಬಳ ವಿವರ, ಅರ್ಜಿ ಸಲ್ಲಿಕೆ ವಿವರವನ್ನು ಇಲ್ಲಿ ನೀಡಲಾಗಿದ್ದು; ಲೇಖನವನ್ನು ಕೊನೆಯವರೆಗೂ ಓದಿ…
ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana
Gram Panchayat Recruitment 2024 ನೇಮಕಾತಿ ಸಂಕ್ಷಿಪ್ತ ವಿವರ
- ಹುದ್ದೆಗಳ ಹೆಸರು : ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು
- ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
- ಒಟ್ಟು ಹುದ್ದೆಗಳು : 18 ಹುದ್ದೆಗಳು
- ಉದ್ಯೋಗ ಸ್ಥಳ : ಹಾವೇರಿ ಜಿಲ್ಲೆ
ಶೈಕ್ಷಣಿಕ ವಿದ್ಯಾರ್ಹತೆ ಏನು?
Haveri Gram Panchayat Recruitment 2024 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ಅರ್ಹತೆ ಹೊಂದಿರಬೇಕು:
- ದ್ವಿತೀಯ ಪಿಯುಸಿ ಪಾಸಾಗಿರಬೇಕು.
- ಸರ್ಟಿಫಿಕೇಶನ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು.
- ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಪಡೆದು ಉತ್ತೀರ್ಣರಾಗಿರಬೇಕು.
ಒಂದು ವೇಳೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ದ್ವಿತೀಯ ಪಿಯುಸಿ ಅರ್ಹತೆಯನ್ನು ಹೊರತುಪಡಿಸಿ ಉಳಿದ ಅರ್ಹತೆಗಳನ್ನು ಹೊಂದಿರದೆ ಇದ್ದಲ್ಲಿ, ದ್ವಿತೀಯ ಪಿಯುಸಿಯನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY
ವಯೋಮಿತಿ ಅರ್ಹತೆ ಏನು?
ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯು ವರ್ಗಗಳ ಅನುಸಾರ ಈ ಕೆಳಗಿನಂತಿರುತ್ತದೆ:
- ಸಾಮಾನ್ಯ ವರ್ಗದವರಿಗೆ : 35 ವರ್ಷ
- 2ಎ, 2ಬಿ, 3ಎ,3ಬಿ ವರ್ಗದವರಿಗೆ : 38 ವರ್ಷ
- ಪ. ಜಾತಿ, ಪ. ಪಂಗಡ, ಪ್ರವರ್ಗ 1 ವರ್ಗದವರಿಗೆ : 40 ವರ್ಷ
ಮಾಸಿಕ ಸಂಬಳವೆಷ್ಟು?
ಗ್ರAಥಾಲಯ ಮೇಲ್ವಿಚಾರಕರಾಗಿ ಅಂತಿಮ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 15,196 ರೂಪಾಯಿ ಸಂಬಳ ನಿಗದಿಪಡಿಸಲಾಗಿದೆ. ಜೊತೆಗೆ ಇತರ ಸರಕಾರಿ ಸವಲತ್ತುಗಳು ಅನ್ವಯವಾಗುತ್ತವೆ.
ಅರ್ಜಿ ಶುಲ್ಕವೆಷ್ಟು?
- ಸಾಮಾನ್ಯ ವರ್ಗದವರು : 500 ರೂಪಾಯಿ
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 300 ರೂಪಾಯಿ
- ಪ. ಜಾತಿ, ಪ. ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 200 ರೂಪಾಯಿ
- ಅಂಗವಿಕಲ ಅಭ್ಯರ್ಥಿಗಳಿಗೆ : 100 ರೂಪಾಯಿ
ನೇಮಕಾತಿಯ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
15-07-2024 - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
31-07-2024
ಅಧಿಸೂಚನೆ : Download
ಅರ್ಜಿ ಸಲ್ಲಿಸುವ ಲಿಂಕ್ : Apply ಮಾಡಿ
ಉದ್ಯೋಗದ ಕೊಡಿಸುವ ವಂಚಕರಿಂದ ಹುಶಾರ್ | ಮೋಸದ ಉದ್ಯೋಗ ಜಾಲದಿಂದ ಪಾರಾಗಲು ಹೀಗೆ ಮಾಡಿ… Beware of job scams
Hi please send me document digitals
IM LOOKING LIBRARY JOB