PM Awas Yojana- ಮನೆ ನಿರ್ಮಾಣಕ್ಕೆ ₹2.50 ಲಕ್ಷ ಸಹಾಯಧನ | ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಆಹ್ವಾನ

WhatsApp Group Join Now
Telegram Group Join Now
Spread the love

ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆ (ನಗರ) 2.0 (PM Awas Yojana) ಅಡಿಯಲ್ಲಿ ಸ್ವಂತ ಮನೆ ಕಟ್ಟಲು ₹2.50 ಲಕ್ಷದ ವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಲು, ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ನೆರವು ನೀಡುವುದು. ಈ ಹಂತದಲ್ಲಿ 1 ಕೋಟಿ ಕುಟುಂಬಗಳಿಗೆ ಮನೆ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.

ಯಾರೆಲ್ಲ ಇದರ ಪ್ರಯೋಜನ ಪಡೆಯಬಹುದು?

ಅರ್ಜಿ ಸಲ್ಲಿಸುವ ಫಲಾನುಭವಿಗಳು ಭಾರತೀಯ ನಾಗರಿಕರಾಗಿರಬೇಕು. ಕುಟುಂಬದ ಯಾರೂ ಈಗಾಗಲೇ ಸರ್ಕಾರದ ಇಂತಹ ವಸತಿ ಯೋಜನೆಯ ಲಾಭ ಪಡೆದಿರಬಾರದು. ಸ್ವಂತ ಮನೆ ಹೊಂದಿರಬಾರದು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS/LIG/MIG) ಸೇರಿರಬೇಕು.

ವಿಧವೆಯರು, ಒಂಟಿ ಮಹಿಳೆಯರು, ವಿಕಲಾಂಗರು, ಹಿರಿಯ ನಾಗರಿಕರು, ಟ್ರಾನ್ಸ್ಜೆಂಡರ್, SC/ST ಸಮುದಾಯದವರು, ದಿನಗೂಲಿಗಾರರು, ಬೀದಿ ವ್ಯಾಪಾರಿಗಳು, ಕೊಳಗೇರಿ ನಿವಾಸಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆ (ನಗರ) 2.0 ಅಡಿಯಲ್ಲಿ ಸ್ವಂತ ಮನೆ ಕಟ್ಟಲು ₹2.50 ಲಕ್ಷದ ವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ...
PM Awas Yojana Urban 2025 PMAY Application
ಕುಟುಂಬದ ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು?

EWS (Economically Weaker Section) ವರ್ಗದ ಫಲಾನುಭವಿಗಳ ವಾರ್ಷಿಕ ಆದಾಯ ₹3 ಲಕ್ಷದ ವರೆಗೆ ಇರಬೇಕು. LIG (Low Income Group) ವರ್ಗದವರಿಗೆ ₹3 ರಿಂದ ₹6 ಲಕ್ಷ ಹಾಗೂ MIG (Middle Income Group) ವರ್ಗದವರಿಗೆ ₹6 ರಿಂದ ₹9 ಲಕ್ಷ ವಾರ್ಷಿಕ ಆದಾಯ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಫೋಟೋ
  • ಮೊಬೈಲ್ ನಂಬರ್
ಹೇಗೆ ಅರ್ಜಿ ಸಲ್ಲಿಸಬೇಕು?

ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಥವಾ pmaymis.gov.in ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಅದನ್ನು ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರದ ಅಧಿಕಾರಿಗಳು ಪರಿಶೀಲನೆಗೆ ನಡೆಸುತ್ತಾರೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಮೆಸೇಜ್ ಅಥವಾ ಕಾಲ್ ಮೂಲಕ ತಿಳಿಸಲಾಗುತ್ತದೆ. ಅನುಮೋದನೆಗೊಂಡವರಿಗೆ ಹಣಕಾಸು ಸಹಾಯಧನ ನೀಡಲಾಗುತ್ತದೆ ಅಥವಾ ಬ್ಯಾಂಕ್ ಲೋನ್ ಮೇಲಿನ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಮನೆ ಇಲ್ಲದವರು, ಆರ್ಥಿಕವಾಗಿ ಹಿಂದುಳಿದವರು ತಮ್ಮದೇ ಆದ ಮನೆ ಕನಸು ನನಸಾಗಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶ. ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ: pmaymis.gov.in


Spread the love
WhatsApp Group Join Now
Telegram Group Join Now

Leave a comment

error: Content is protected !!