ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

WhatsApp Group Join Now
Telegram Group Join Now
Spread the love

Sheep and Goat Society Prostaha Dhana  : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು (Karnataka Sheep and Wool Development Corporation) ಇಡೀ ರಾಜ್ಯಾದ್ಯಂತ ತನ್ನದೇ ಆದ ಕಾರ್ಯಜಾಲ ಹೊಂದಲು ಹಾಗೂ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸರಕಾರಿ ಯೋಜನೆಗಳನ್ನು ತಲುಪಿಸಲು ವೇದಿಕೆಯಾಗಿ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು (Sheep and Wool Producers Co-operative Society) ಸ್ಥಾಪಿಸಿದೆ. ಈ `ಸೊಸೈಟಿ’ಗಳ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಎಲ್ಲರಿಗೂ ಕುರಿ/ಮೇಕೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

ಹೋಬಳಿ ಮಟ್ಟದಲ್ಲಿ ಪ್ರತಿ ಹದಿನೈದು ಸಾವಿರ ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದAತೆ ಈಗಾಗಲೇ 625 ಸಹಕಾರ ಸಂಘಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಈ ಸಹಕಾರ ಸಂಘಗಳೇ ನಿಗಮದ ಕೇಂದ್ರ ಬಿಂದುವಾಗಿದ್ದು; ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಇವುಗಳ ಮೂಲಕ ವಿತರಿಸುವ, ತಲುಪಿಸುವ ಬದ್ಧತೆಯನ್ನು ನಿಗಮ ತೋರಿಸುತ್ತಾ ಬರುತ್ತಿದೆ.

ಸಹಕಾರ ಸಂಘಗಳ ಮೂಲಕ ಮಾತ್ರ ಕುರಿ-ಮೇಕೆ ಸಾಕಾಣಿಕೆದಾರರ ಆರ್ಥಿಕ, ಸಾಮಾಜಿಕ, ತಾಂತ್ರಿಕ, ಸಾಂಸ್ಕೃತಿಕ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆೆ. ಹಾಗಾಗಿ ಕುರಿ, ಮೇಕೆಗಳ ಆರೋಗ್ಯ ರಕ್ಷಣೆ, ರೋಗ ನಿಯಂತ್ರಣ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಚಟುವಟಿಕೆಗಳನ್ನು ಇವುಗಳ ಮೂಲಕ ಸಾಧಿಸುವುದು ನಿಗಮದ ಮುಖ್ಯ ಧ್ಯೇಯವಾಗಿದೆ.

ಹೀಗಾಗಿ ‘ಕುರಿ-ಮೇಕೆ ಸೊಸೈಟಿ’ ಸ್ಥಾಪಿಸಲು ನಿಗಮವು ಪ್ರೋತ್ಸಾಹಿಸುತ್ತ ಬಂದಿದ್ದು; ಈಗಾಗಲೇ ರಚನೆಯಾಗಿ ಅನುಮೋದನೆಗೊಂಡ ಸಂಘಗಳಿಗೆ ರೂ.5 ಲಕ್ಷ ಪ್ರೋತ್ಸಾಹ ಧನ ನೀಡುವುದು. ಮಾತ್ರವಲ್ಲ ಸಂಘದಲ್ಲಿ ಸದಸ್ಯತ್ವ ಪಡೆಯುವ ಮೂಲಕ ಕುರಿ-ಮೇಕೆ ಸಾಕಾಣಿಕೆ ವೈಜ್ಞಾನಿಕ ತರಬೇತಿ, ಉಚಿತ ಜಂತುನಾಶಕ ಔಷಧಿ, ಆಧುನಿಕ ಕುರಿ ತೂಕದ ಯಂತ್ರ, ಕೊಟ್ಟಿಗೆ ವಿಶೇಷ ಘಟಕ ಯೋಜನೆ, ಅನುಗ್ರಹ ಕೊಡುಗೆ ಯೋಜನೆ, ವಿಶೇಷ ಪರಿಕರಗಳ ಕಿಟ್ ವಿತರಣೆ ಸೇರಿದಂತೆ ಅನೇಕ ಯೋಜನೆಗಳ ಲಾಭವನ್ನು ಕುರಿ-ಮೇಕೆ ಸಾಕಾಣಿಕೆದಾರರು ನೇರವಾಗಿ ಪಡೆಯಬಹುದು.

ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

ಕುರಿ ಸೊಸೈಟಿ ರಚಿಸುವ ವಿಧಾನ…

ಸೊಸೈಟಿ ರಚಿಸಿ ನಿಗಮದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಂಘಟಿತರಾಗುವ ಹಂಬಲವುಳ್ಳ ಸಮಾನಮನಸ್ಕ ಕುರಿ ಮೇಕೆ ಸಾಕಣೆದಾರರು ನಿಗಮದ ಅಧಿಕಾರಿ ಮತ್ತು ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಕರೆಯಬೇಕು. ಸದರಿ ಸಭೆಯಲ್ಲಿ 10 ಪ್ರವರ್ತಕರಲ್ಲಿ ಒಬ್ಬ ಮುಖ್ಯ ಪ್ರವರ್ತಕರನ್ನು (ಚಿಫ್ ಪ್ರಮೋಟರ್) ಆಯ್ಕೆ ಮಾಡಬೇಕು. ಸದರಿಯವರು ಸಹಕಾರ ಸಂಘವನ್ನು ಸ್ಥಾಪಿಸಿ ಸಹಕಾರ ಇಲಾಖೆಯಲ್ಲಿ ನೋಂದಣಿಗೊಳಿಸಲು ಶ್ರಮಿಸಬೇಕು.

ಅನಂತರ ಸಹಾಯಕ ನಿಬಂಧಕರಿ೦ದ ಷೇರು ಧನ ಸಂಗ್ರಹಣೆಗೆ ಅನುಮತಿ ಪಡೆಯಬೇಕು. ಕನಿಷ್ಠ 100 ಜನ ಕುರಿ ಸಾಕಾಣಿಕೆದಾರರನ್ನು ಸಂಘದ ಸದಸ್ಯರನ್ನಾಗಿ ನೊಂದಾಯಿಸಿ ಪ್ರತಿಯೊಬ್ಬರಿಗೆ ಷೇರುಧನ ರೂ.100ಗಳಂತೆ ಸಂಗ್ರಹಿಸಬೇಕು. ಸಂಗ್ರಹಿಸಿದ ಮೊತ್ತವನ್ನು ಸ್ಥಳೀಯ ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಅಮಾನತ್ತು ಖಾತೆಯನ್ನು ತೆರೆದು ಷೇರು ಮೊತ್ತವನ್ನು ಸದರಿ ಖಾತೆಗೆ ಜಮಾ ಮಾಡಬೇಕು.

ಕನಿಷ್ಠ ಶೇಕಡ 30ರಷ್ಟು ಮಹಿಳಾ ಸದಸ್ಯರನ್ನು ಸಂಘದಲ್ಲಿ ಹೊಂದಿರಬೇಕು ಹಾಗೂ ಶೇಕಡ 18ರಷ್ಟು ಹರಿಜನ (ಎಸ್.ಸಿ) ಹಾಗೂ ಶೇಕಡ 3ರಷ್ಟು ಗಿರಿಜನ (ಎಸ್.ಟಿ) ಸದಸ್ಯರನ್ನು ನೊಂದಾಯಿಸಿಕೊಳ್ಳಬೇಕು. ತದನಂತರ ಆಯಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 7ರನ್ವಯ ಹಾಗೂ ಕಲಂ 8ರನ್ವಯ ನೋಂದಣಿ ಮಾಡಬೇಕು.

ನೋಂದಣಿಯಾದ ನಂತರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನು ಜಿಲ್ಲೆಯ ಚುನಾವಣಾಧಿಕಾರಿ ನೇಮಕ ಮಾಡುತ್ತಾರೆ. ನಂತರ ಚುನಾವಣೆ ಮುಖಾಂತರ 11ರಲ್ಲಿ ನಿರ್ದೇಶಕರ ಆಯ್ಕೆ ನಡೆಸಲಾಗುವುದು. ಒಬ್ಬರು ನಿಗಮದ/ಇಲಾಖೆಯ ಅಧಿಕಾರಿ ಇರುತ್ತಾರೆ. ಎಲ್ಲಾ ನಿರ್ದೇಶಕರ ಸಭೆಯನ್ನು ಕರೆದು ಸಭೆಯಲ್ಲಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡುವುದು. ಬಳಿಕ ಸಂಘದ ಬೈಲಾ ಪ್ರಕಾರ ಕಾರ್ಯದರ್ಶಿಯನ್ನು ನಿಯುಕ್ತಗೊಳಿಸುವುದು.

Sheep-Goat Society Prostaha Dhana

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

ಸಂಘವನ್ನು ನಿಗಮದಲ್ಲಿ ನೋಂದಾಯಿಸಲು ಅವಶ್ಯವಿರುವ ದಾಖಲಾತಿಗಳು
  • ಸಂಘದ ಬೈಲಾ ಪ್ರತಿ
  • ನೋಂದಣಿ ಪ್ರಮಾಣ ಪತ್ರದ ಪ್ರತಿ
  • ಸಂಘದ ಷೇರುದಾರರ ಪಟ್ಟಿ
  • ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕುರಿಗಳ ಸಂಖ್ಯೆ ಬಗ್ಗೆ ಸಹಾಯಕ ನಿರ್ದೇಶಕರು ಅಥವಾ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಧೃಡೀಕರಣ ಪತ್ರ
  • 50ಕ್ಕಿಂತ ಕಡಿಮೆ ಕುರಿಗಳನ್ನು ಹೊಂದಿರುವ ಕುರಿಗಾರರ ಪಟ್ಟಿ
  • ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಬ್ಯಾಂಕ್ ಪಾಸ್ ಪುಸ್ತಕದ ಖಾತೆ ಸಂಖ್ಯೆಯ ಜೆರಾಕ್ಸ್ ಪ್ರತಿ
  • ಸಂಘದ ಕಾರ್ಯ ನಿರ್ವಹಣಾಧಿಕಾರಿಯು ಕೋರಿದ ಪತ್ರ
  • ಸಂಬ೦ಧಿಸಿದ ಆಯಾ ಜಿಲ್ಲೆಯ ಅನುಷ್ಠಾಧಿಕಾರಿಯಗಳಿಂದ ಶಿಫಾರಸ್ಸು ಪತ್ರ
  • ಸಂಘದ ಕಾರ್ಯವ್ಯಾಪ್ತಿಯಲ್ಲಿ 15,000 ಕುರಿಗಳ ಸಂಖ್ಯೆ ಇರುವ ಬಗ್ಗೆ ದೃಢೀಕರಣ
  • ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪೂರ್ಣ ಹೆಸರು ಹಾಗೂ ವಿಳಾಸ ಮತ್ತು ಮೊಬೈಲ್ ಸಂಖ್ಯೆ
  • ಸಂಘದ ವ್ಯಾಪ್ತಿಯಲ್ಲಿರುವ ಹಳ್ಳಿಗಳು, ಮತ್ತೊಂದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿರಬಾರದು.
  • ಇತ್ತೀಚಿನ ಲೆಕ್ಕಪರಿಶೋಧನಾ ವರದಿ (ಹಳೆಯಸಂಘವಾಗಿದ್ದಲ್ಲಿ)
  • ಸಂಘದ ನಿರ್ದೇಶಕರ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿಗಳು ನೀಡಿದ ಆದೇಶ
  • ಸಂಘದ ಅಧ್ಯಕ್ಷರ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳ ಪೂರ್ತಿ ವಿಳಾಸ ಹಾಗೂ ಮೊಬೈಲ್ ಸಂಖ್ಯೆ

ಈ ಮೇಲಿನ ಎಲ್ಲ ದಾಖಲೆಯನ್ನು ಗೆಜೆಟೆಡ್ ಅಧಿಕಾರಿಯವರಿಂದ ಧೃಡೀಕರಿಸಿಸಲ್ಪಟ್ಟ ಪ್ರಸ್ತಾವನೆಯನ್ನು ಜಿಲ್ಲಾ ಅನುಷ್ಠಾನಾಧಿಕಾರಿಗಳ ಮುಖಾಂತರ ನಿಗಮದ ಕೇಂದ್ರ ಕಛೇರಿಗೆ ಸಲ್ಲಿಸಬೇಕು.

ಉದ್ಯೋಗದ ಕೊಡಿಸುವ ವಂಚಕರಿಂದ ಹುಶಾರ್ | ಮೋಸದ ಉದ್ಯೋಗ ಜಾಲದಿಂದ ಪಾರಾಗಲು ಹೀಗೆ ಮಾಡಿ… Beware of job scams

ಸಂಘವು ನಿಗಮದಲ್ಲಿ ನೋಂದಣಿಯಾದ ನಂತರ ದೊರೆಯುವ ಸೌಲಭ್ಯಗಳು

ಸಂಘವು ನಿಗಮದಲ್ಲಿ ನೋಂದಣಿಯಾದ ನಂತರ ಕ್ರಿಯಾಶೀಲವಾಗಿರುವ ಬಗ್ಗೆ ಸಂಬ೦ಧಪಟ್ಟ ಜಿಲ್ಲೆಗಳ ಅನುಷ್ಠಾನಾಧಿಕಾರಿಗಳ ಮುಖಾಂತರ ವರದಿಯನ್ನು ನಿಗಮಕ್ಕೆ ಸಲ್ಲಿಸಬೇಕು. ಬಳಿಕ ಷೇರು ಬಂಡವಾಳ ಒದಗಿಸುವ ಬಗ್ಗೆ ಜೇಷ್ಠತೆ ಆಧಾರದ ಮೇರೆಗೆ ಪರಿಗಣಿಸಲಾಗುವುದು. ಸಂಘದ ಮೂರು ವರ್ಷದ ಲೆಕ್ಕ ಪರಿಶೋಧನಾ ವರದಿಯನ್ನು ಪರಿಶೀಲಿಸಿ ಷೇರು ಬಂಡವಾಳ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.

  • ಸಂಘದ ಎಲ್ಲಾ ಸದಸ್ಯರಿಗೆ ಕುರಿ ಸಾಕಾಣಿಕೆ ವೈಜ್ಞಾನಿಕ ತರಬೇತಿ
  • ಕುರಿ ತಳಿ ಅಭಿವೃದ್ಧಿ ಯೋಜನೆ ಅನುಸಾರ ಮಿಶ್ರತಳಿ ಟಗರುಗಳನ್ನು ಲಭ್ಯತೆಯ ಮೇರೆಗೆ ಸಹಾಯ ಧನ
  • ಕುರಿಗಳಿಗೆ ನಿಗಮದಿಂದ ಉಚಿತವಾಗಿ ಜಂತುನಾಶಕ ಔಷಧಿ ವಿತರಣೆ
  • ಎಲ್ಲಾ ನೋಂದಾಯಿತ ಕುರಿಗಾರರಿಗೆ ರೂ. 5/- ಪಡೆದು ಪಾಸ್ ಪುಸ್ತಕ ವಿರಣೆ
  • ಆಧುನಿಕ ಕುರಿ ತೂಕದ ಯಂತ್ರಗಳನ್ನು ಅವಶ್ಯಕತೆ ಮೇರೆಗೆ ನಿಗಮದಿಂದ ವಿತರಣೆ
  • ಸಂಘದಲ್ಲಿ ನೋಂದಣಿಯಾಗಿರುವ ಸದಸ್ಯರುಗಳನ್ನು ಮಾತ್ರ ಈ ಯೋಜನೆಗಳಲ್ಲಿ ಪರಿಗಣಿಸಲಾಗುವುದು.
  • ನಿಗಮದಲ್ಲಿ ನೋಂದಣಿಯಾಗಿ 3 ವರ್ಷದ ಹಾಗೂ ವಾರ್ಷಿಕ ಮಹಾ ಸಭೆ ನಡೆಸಿದ ಸಂಘಗಳಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸುವ ಕುರಿತು 2015ರಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರತಿ ಓದಲು ಇಲ್ಲಿ ಒತ್ತಿ…
ಹೆಚ್ಚಿನ ವಿವರಗಳಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವೆಬ್‌ಸೈಟ್ ಕೊಂಡಿ: https://www.karnataka.gov.in/

Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ


Spread the love
WhatsApp Group Join Now
Telegram Group Join Now
error: Content is protected !!