PM Kisan Samman Nidhi Mobile Updation : ಪಿಎಂ ಕಿಸಾನ್ ಯೋಜನೆಯಡಿ ರೈತರು ನಿರಂತರವಾಗಿ ಹಣ ಪಡೆಯಲು ಸರ್ಕಾರ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನು, ಹೊಸ ಹೊಸ ನಿಯಮಗಳನ್ನು ರೂಪಿಸುತ್ತಾ ಬರುತ್ತಿದೆ. ನಕಲಿ ಫಲಾನುಭವಿಗಳನ್ನು ತಡೆಯುವ ನಿಟ್ಟಿನಲ್ಲಿ ಇಕೆವೈಸಿ (eKYC) ಕಡ್ಡಾಯಗೊಳಿಸಿರುವ ಸರ್ಕಾರ ಇದೀಗ ಮತ್ತೊಂದು ಹೊಸ ನಿಯಮ ಪ್ರಕಟಿಸಿದೆ…
ಒಂದೇ ಮೊಬೈಲ್ ಸಂಖ್ಯೆ ಹೊಂದುವುದು ಕಡ್ಡಾಯ
ಅನರ್ಹ ಫಲಾನುಭವಿಗಳನ್ನು ಪಿಎಂ ಕಿಸಾನ್ ಯೋಜನೆಯಿಂದ ಹೊರಗಿಡುವ ಹಿನ್ನಲೆಯಲ್ಲಿ ಸರ್ಕಾರ ಇದೀಗ ರೈತರು ಒಂದೇ ಮೊಬೈಲ್ ಸಂಖ್ಯೆ ಹೊಂದುವುದು ಕಡ್ಡಾಯಗೊಳಿಸಿದೆ. ಬೇರೆ ರೈತರು ಒಂದೇ ಮೊಬೈಲ್ ನೀಡಿದ್ದರೆ ಕೂಡಲೇ ಬದಲಾಯಿಸಿಕೊಳ್ಳುವಂತೆ ಗಡುವು ನೀಡಲಾಗಿದೆ.
ಫಲಾನುಭವಿಗಳು ಇನ್ನು ಮುಂದೆ ಭಾರತ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಂದೇ ಮೊಬೈಲ್ ಸಂಖ್ಯೆ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೃಷಿ ಇಲಾಖೆಯ ವಿವಿಧ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರುಗಳು ಪ್ರಕಟಣೆ ಹೊರಡಿಸಿದ್ದಾರೆ.

ಆರ್ಥಿಕ ನೆರವು ಸ್ಥಗಿತ
ಮೊಬೈಲ್ ಸಮಸ್ಯೆಯಿಂದ ರೈತರು ಒಂದೇ ಮೊಬೈಲ್ ಸಂಖ್ಯೆ ಉಪಯೋಗಿಸಿಕೊಂಡು ಯೋಜನೆಯಡಿ ನೋಂದಣಿಯಾಗಿದ್ದಲ್ಲಿ ಅಂತಹ ಫಲಾನುಭವಿಗಳಿಗೆ ಮುಂದಿನ ಕಂತುಗಳ ಆರ್ಥಿಕ ನೆರವು ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗಾಗಿ, ಭಾರತ ಸರ್ಕಾರದ ಪಿಎಂ ಕಿಸಾನ್ ವೆಬ್‌ಸೈಟ್ ಮುಖಪುಟದಲ್ಲಿ ನೀಡಿರುವ https://pmkisan.gov.in/MobileUpdation_Pub.aspx ಲಿಂಕ್ ಮೂಲಕ ಇದೇ ಆಗಸ್ಟ್ 31ರೊಳಗೆ ತಿದ್ದುಪಡಿ ಮಾಡಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana
1 thought on “ಪಿಎಂ ಕಿಸಾನ್ ಹಣ ಜಮೆಗೆ ಕೃಷಿ ಇಲಾಖೆ ಸೂಚನೆ | ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ PM Kisan Samman Nidhi Mobile Updation”